
ಫ್ಯಾಟಿ ಲಿವರ್. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರನ್ನೂ ಕಾಡುವ ಸಮಸ್ಯೆ. ಪ್ಯಾಕ್ ಮಾಡಿದ ಆಹಾರ, ತಂಪು ಪಾನೀಯ, ಮದ್ಯ ಸೇವನೆಯಂತಹ ಅಭ್ಯಾಸಗಳು ಮತ್ತು ಅಧಿಕ ತೂಕ ಈ ಸಮಸ್ಯೆ ಉಂಟುಮಾಡಬಹುದು.
ಜಂಕ್ ಫುಡ್ ಮತ್ತು ಪಾನೀಯಗಳಿಂದ ದೂರ ಇರುವುದು, ಪೋಷಕಾಂಶಭರಿತ ಆಹಾರ ಮತ್ತು ವಾರಕ್ಕೆ ಕನಿಷ್ಠ 135 ನಿಮಿಷಗಳ ವ್ಯಾಯಾಮ ಇದಕ್ಕೆ ಪರಿಹಾರವಾಗಿದೆ ಎಂದು ವೈದ್ಯರು ಹೇಳುತ್ತಾರೆ. ತೂಕ ಕಡಿಮೆಮಾಡಿಕೊಳ್ಳುವುದರ ಜೊತೆಗೆ ತಮ್ಮ ಆಹಾರದಲ್ಲಿ ಮೊಟ್ಟೆ ಮತ್ತು ಮೀನು ಸೇರಿಸಬೇಕು ಎನ್ನುತ್ತಾರೆ.