ಅಡ್ಕಸ್ಥಳ: ನಿಲ್ಲಿಸಿದ್ದ ಪಿಕ್ಆಪ್ ಟೆಂಪೋಗೆ ಕರ್ನಾಟಕ ಸಾರಿಗೆ ಬಸ್ ಡಿಕ್ಕಿ; ಮಣಿಯಂಪಾರೆ ನಿವಾಸಿ ಮೃತ್ಯು!

Share with

ಪಿಕ್ ಆಪ್ ಟೆಂಪೊಗೆ ಕರ್ನಾಟಕ ಸಾರಿಗೆ (ಕೆಎಸ್ಸಾರ್ಟಿಸಿ) ಬಸ್ಸು ಡಿಕ್ಕಿಯಾಗಿ ಪಿಕ್ ಆಪ್ ಚಾಲಕ ಮೃತ್ಯು.

ಪೆರ್ಲ: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಅಡಿಕೆ ಸಸಿಗಳನ್ನು ತುಂಬಿಕೂಂಡಿದ್ದ ಪಿಕ್ ಆಪ್ ಟೆಂಪೊಗೆ ಕರ್ನಾಟಕ ಸಾರಿಗೆ (ಕೆಎಸ್ಸಾರ್ಟಿಸಿ) ಬಸ್ಸು ಡಿಕ್ಕಿಯಾಗಿ ಪಿಕ್ ಆಪ್ ಚಾಲಕ ದಾರುಣವಾಗಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ಸೆ.26ರಂದು ಬೆಳಗ್ಗೆ ಅಡ್ಕಸ್ಥಳ ಗಡಿ ಭಾಗದಲ್ಲಿ ಈ ಅಪಘಾತ ಸಂಭವಿಸಿದ್ದು ಮಣಿಯಂಪಾರೆ ನಿವಾಸಿ ಮುಸ್ತಾಫ ಪಿ.ಎ.ಪಜ್ಜಾನ (43) ಮೃತಪಟ್ಟ ವ್ಯಕ್ತಿಯಾಗಿದ್ದಾರೆ.

ಎದುರಿನಿಂದ ಬಂದ ಕಾರೊಂದನ್ನು ತಪ್ಪಿಸುವ ರಭಸದಲ್ಲಿ ಕೆಎಸ್ಸಾರ್ಟಿಸಿ ಬಸ್ಸು ಪಿಕ್ ಆಪ್ ಗೆ ಡಿಕ್ಕಿಯಾಗಿದ್ದು ತಲೆಗೆ ತೀವ್ರ ಗಾಯಗೊಂಡಿರುವ ಮುಸ್ತಫಾರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಇವರು ಕೆಲಸಗಾರರೊಂದಿಗೆ ಅಡಿಕೆ ಸಸಿ ತರಲು ತೆರಳಿರುವ ವೇಳೆ ಈ ದುರ್ಘಟನೆ ಸಂಭವಿಸಿದ್ದು ಜತೆಗಿದ್ದ ಇನ್ನೊರ್ವರಿಗೂ ಗಾಯಗಳಾಗಿರುವ ಬಗ್ಗೆ ತಿಳಿದು ಬಂದಿದೆ. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


Share with

Leave a Reply

Your email address will not be published. Required fields are marked *