ಮಂಗಳೂರು – ಸೂರತ್ ರೈಲು ಇನ್ಮುಂದೆ ನಿರಂತರ ಸಂಚಾರ

Share with

ಉಡುಪಿ: ಮಂಗಳೂರು- ಸೂರತ್ ನಡುವೆ ಸಂಚರಿಸುತ್ತಿದ್ದ ವಿಶೇಷ ರೈಲು ಇನ್ನು ಮುಂದೆ ವಾರದಲ್ಲಿ ಎರಡು ದಿನ ನಿರಂತರ ಸಂಚರಿಸಲಿದೆ.

ರೈಲು 09057 / 09058 ಸಂಖ್ಯೆಯಡಿ ಸೂರತ್- ಮಂಗಳೂರು ಜಂಕ್ಷನ್ ನಡುವೆ ವಿಶೇಷ ಸೇವೆ ಒದಗಿಸುತಿತ್ತು. ಜೂ.3ರಿಂದ 19057 / 19058 ರೈಲು ಸಂಖ್ಯೆಯಡಿ ನಿರಂತರ ಸೇವೆ ಒದಗಿಸಲಿದೆ.

19057 ರೈಲು ಜೂ. 3ರಿಂದ ಪ್ರತೀ ಬುಧವಾರ ಹಾಗೂ ರವಿವಾರ ಸಂಜೆ 7.35ಕ್ಕೆ ಸೂರತ್‌ನಿಂದ ಹೊರಟು ಮಾರನೆ ದಿನ ಸಂಜೆ 7.45ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. 19058 ರೈಲು ಜೂ.4ರಿಂದ ಪ್ರತಿ ಗುರುವಾರ ಹಾಗೂ ಸೋಮವಾರ ರಾತ್ರಿ 10.30ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಟು, ಮಾರನೆ ದಿನ ರಾತ್ರಿ 11.45ಕ್ಕೆ ಸೂರತ್ ತಲುಪಲಿದೆ.

ಈ ರೈಲಿಗೆ ಉಧ್ಯಾ, ವಲ್ಸಾಡ್, ವಾಪಿ, ವಾಸೈ ರೋಡ್, ಪನ್ವೇಲ್, ರೋಹಾ, ಚಿಪ್ಯೂನ್, ರತ್ನಾಗಿರಿ, ಸಿಂಧುದುರ್ಗ, ಸಾವಂತವಾಡಿ, ತಿವಿಂ, ಮಡ್‌ಗಾಂವ್‌, ಕಾರವಾರ, ಅಂಕೋಲಾ, ಗೋಕರ್ಣ ರಸ್ತೆ, ಕುಮಟಾ, ಮುರ್ಡೇಶ್ವರ, ಭಟ್ಕಳ, ಬೈಂದೂರು (ಮೂಕಾಂಬಿಕಾ ರೋಡ್), ಕುಂದಾಪುರ, ಉಡುಪಿ, ಮೂಲ್ಕಿ ಹಾಗೂ ಸುರತ್ಕಲ್ ಸಹಿತ ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಇದೆ.

ರೈಲಿನಲ್ಲಿ 20 ಬೋಗಿಗಳು ಇರಲಿವೆ. 8 ಎಸಿ, ಕೋಚ್, 6 ಕ್ಲೀಪರ್ ಕೋಚ್, 4 ಜನರಲ್ ಕೋಚ್ ಹಾಗೂ 2 ಎಸ್ಎಲ್ ಆರ್ಡಿ ಕೋಚ್‌ಗಳು ಇರಲಿವೆ.


Share with

Leave a Reply

Your email address will not be published. Required fields are marked *