
ಕಾಸರಗೋಡು : ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ಕ್ಷೇತ್ರದಲ್ಲಿ ನಮಸ್ಕಾರ ಮಂಟಪದ ಕಾಮಗಾರಿ ನಡೆಯಲಿರುವುದರಿಂದ ಮಾ.14ರಿಂದ ಪೂಜಾ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಬೆಳಗ್ಗಿನ ಪೂಜೆ ಬೆಳಗ್ಗೆ 7.30ಕ್ಕೆ ಮತ್ತು ಮಧ್ಯಾಹ್ನದ ಪೂಜೆ 8.30ಕ್ಕೆ ನಡೆಯಲಿದೆ. 9 ಗಂಟೆಗೆ ನಡೆ ಮುಚ್ಚಲಿದೆ. ರಾತ್ರಿ ಪೂಜೆ ಯಥಾ ಸಮಯ 7.30ಕ್ಕೆ ನಡೆಯಲಿದೆ. ಕಾಮಗಾರಿ ಪೂರ್ಣವಾಗುವವರೆಗೆ ಈ ಬದಲಾವಣೆ ಇರಲಿದ್ದು ಕಾಮಗಾರಿ ಪೂರ್ಣಗೊಂಡ ನಂತರ ಯಥಾ ಸಮಯದಲ್ಲಿ ಪೂಜೆ ನಡೆಯಲಿದೆ. ದಿನ ನಿತ್ಯದ ಅನ್ನದಾನದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಎಲ್ಲಾ ಸೇವೆಗಳು ಯಥಾ ಪ್ರಕಾರ ನಡೆಯಲಿದೆ. ಈ ಸಮಯದಲ್ಲಿ ನಮಸ್ಕಾರ ಮಂಟಪದ ಸಮೀಪ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಭಕ್ತ ಜನರು ಗಮನಿಸಿ ಸಹಕರಿಸಬೇಕೆಂದು ದೇವಸ್ಥಾನದ ಆಡಳಿತ ಸಮಿತಿ ಪ್ರಕಟಣೆಯಲ್ಲಿ ತಿಳಿದಿದೆ.