ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವಂತೆ ರಾಜ್ಯದ ಇಬ್ಬರು ರೈತರಿಗೆ ಕೇಂದ್ರ ಸರ್ಕಾರ ಆಹ್ವಾನ ನೀಡಿದೆ.
ಮಂಡ್ಯದ ಎನ್.ಎಚ್. ವಿರೂಪಾಕ್ಷಪ್ಪ ಹಾಗೂ ಕಲಬುರಗಿಯ ನಂದೂರ್ (ಕೆ) ಎಂಬ ಹಳ್ಳಿಯ ನಿವಾಸಿ ಆನಂದ್ ಬೆಲಗುಂಪಿ ಅವರಿಗೆ ದೆಹಲಿಯ ಕರ್ತವ್ಯ ಪಥದಲ್ಲಿ ನಡೆಯುವ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ಬಂದಿದೆ. ಕೃಷಿ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆಗಳನ್ನು ಪರಿಗಣಿಸಿ ಈ ಆಹ್ವಾನವನ್ನು ಕೇಂದ್ರ ಸರ್ಕಾರ ನೀಡಿದೆ ಎಂದು ಹೇಳಲಾಗಿದೆ.