ಬಂಟ್ವಾಳ: ಬಂಟ್ವಾಳದ ಶಿಶು ಅಭಿವೃದ್ಧಿ ಇಲಾಖೆ, ಫಜೀರಿನ ಆರೋಗ್ಯ ಕ್ಷೇಮ ಕೇಂದ್ರ, ಗ್ರಾಮ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಪೋಷಣ್ ಮಾಸಾಚರಣೆಯು ಫಜೀರಿನಲ್ಲಿ ನಡೆಯಿತು.
ಪೋಷಣ್ ಮಾಸಾಚರಣೆಯ ಉದ್ದೇಶ ಹಾಗೂ ಪ್ರಯೋಜನಗಳ ಮಾಹಿತಿಯನ್ನು ಮೇಲ್ವಿಚಾರಕಿ ಶೋಭಾ ಎಂ ಅವರು ನೀಡಿದರು. ಪಂಚಾಯಿತಿ ಅಧ್ಯಕ್ಷ ರಫೀಕ್ ಫಜೀರ್ ಅವರು ಮಾತನಾಡಿ ಪೌಷ್ಠಿಕ ಆಹಾರಗಳ ಬಗ್ಗೆ ಮತ್ತು ಆರೋಗ್ಯದ ಕುರಿತು ತಿಳಿಸಿದರು. ಸಾಮಾಜಿಕ ಕಾರ್ಯಕರ್ತರಾದ ಶಮೀರ್ ಅವರು ಅಂಗನವಾಡಿ ದೂರಕುವ ಆಹಾರದಿಂದ ಸಿಗುವ ಪ್ರಯೋಜನ ಮತ್ತು ಸಂಜೀವಿನಿ ಒಕ್ಕೂಟದ ಕುರಿತು ಮಾಹಿತಿಯನ್ನು ನೀಡಿದರು.
ಸಮುದಾಯ ಆರೋಗ್ಯಾಧಿಕಾರಿ ನಯನಾ ಮತ್ತು ಶಬಾನಾ ಅವರು ಸಮತೋಲನ ಆಹಾರದ ಕುರಿತು ಮಾಹಿತಿಯನ್ನು ನೀಡಿದರು. ಪ್ರಾತ್ಯಕ್ಷಿಕೆಯನ್ನು ಅಂಗನವಾಡಿ ಕಾರ್ಯಕರ್ತೆ ಗ್ರೆಟ್ಟಾ ಲೋಬೊ ನೆರವೇರಿಸಿದ್ದು, ಅಂಗನವಾಡಿ ಕಾರ್ಯಕರ್ತೆ ಫ್ಲಾಸಿಡಾ ಕಾರ್ಯಕ್ರಮ ನಿರೂಪಿಸಿದರು. ಲಿಲ್ಲಿ ಅಪ್ಲೇಸ್ ಸ್ವಾಗತಿಸಿ, ಅಂಗನವಾಡಿ ಕಾರ್ಯಕರ್ತೆ ನಮಿತಾ ಅವರು ವಂದಿಸಿದರು.