
ಕಳೆದ ವರ್ಷ ಹೆಸರಾಂತ ಉದ್ಯಮಿ, ದೇಶದ ಅತ್ಯಂತ ಶ್ರೀಮಂತರಲ್ಲಿ ಒಬ್ಬರಾದ ಹಾಗೂ ಪರೋಪಕಾರಕ್ಕೆ ಅತಿಹೆಚ್ಚು ಖ್ಯಾತಿ ಪಡೆದಿದ್ದ ರತನ್ ಟಾಟಾ ಅವರು ಕಳೆದ ವರ್ಷ ಇಹಲೋಕವನ್ನು ತ್ಯಜಿಸಿದ್ದಾರೆ. ಅವರು ಸಾವಿಗೂ ಮುನ್ನ ಉಯಿಲ್ ಬರೆದಿಟ್ಟಿದ್ದರು ಯಾರು ಯಾರಿಗೆ ಏನೆಲ್ಲಾ ಸೇರಬೇಕು ಎಂಬುದನ್ನು ಉಲ್ಲೇಖಿಸಿದ್ದರು. ಅದರಲ್ಲೂ ಪ್ರಮುಖವಾಗಿ 500 ಕೋಟಿ ರೂಪಾಯಿ ಸಂಪತ್ತು ಇಂತಹವರಿಗೆ ಸೇರಬೇಕು ಎಂದು ಬರೆದಿದ್ದು ಅವರು ಯಾರು ಎಂಬುದು ಕೆಲವೇ ಕೆಲವು ಜನರಿಗೆ ಗೊತ್ತಿದೆ.
ಆ 500 ಕೋಟಿ ರೂಪಾಯಿಗೆ ಹಕ್ಕುದಾರರರು ಮೋಹಿನಿ ಮೊಹನ್ ದತ್ತ ಎಂದು ಈಗ ತಿಳಿದು ಬಂದಿದೆ. ಅಸಲಿಗೆ ಇವರು ಜಾರ್ಖಂಡ್ನ ಜೇಮಶೇಡ್ಪುರದ ಒಬ್ಬ ವಾಣಿಜ್ಯೋದ್ಯಮಿ. ಇವರು ಸ್ಟಾಲಿಯನ್ ಎಂಬ ಟ್ರಾವೆಲ್ ಏಜೆನ್ಸಿಯನ್ನು ನಡೆಸುತ್ತಾರೆ. 2013ರಲ್ಲಿ ಇವರು ತಾಜ್ ಗ್ರೂಪ್ ಹೋಟೆಲ್ ಜೊತೆ ಅಂಗಸಂಸ್ಥೆಯಾಗಿ ಸೇರ್ಪಡೆಗೊಂಡಿದ್ದರು. ಮೋಹಿನಿ ಮೋಹನ ದತ್ತಾ ಅವರು ಮತ್ತು ಅವರ ಕುಟುಂಬ ಸ್ಟಾಲಿಯನ್ ಕಂಪನಿಯಲ್ಲಿ ಶೇಕಡಾ 80 ರಷ್ಟು ಷೇರುಗಳನ್ನು ಹೊಂದಿದ್ದರೆ ಟಾಟಾ ಗ್ರೂಪ್ ಶೇಕಡಾ 20 ರಷ್ಟು ಷೇರುಗಳನ್ನು ಹೊಂದಿತ್ತು.
ದತ್ತಾ ಅವರು ಟಿಸಿ ಟ್ರಾವೆಲ್ ಸರ್ವಿಸ್ನ ಡೈರಕ್ಟರ್ ಕೂಡ ಆಗಿ ಸೇವೆ ಸಲ್ಲಿಸಿದ್ದಾರೆ. ಮೋಹಿನಿ ಮೋಹನ್ ದತ್ತಾ ಅವರು ರತನ್ ಟಾಟಾ ಹಾಗೂ ಅವರ ಕುಟುಂಬದವರಿಗೆ ತುಂಬಾ ಆಪ್ತರು. ದತ್ತಾ ಅವರಿಗೆ ಎರಡು ಹೆಣ್ಣು ಮಕ್ಕಳಿದ್ದಾರೆ. ಅವರು ಕೂಡ ಟಾಟಾ ಟ್ರಸ್ಟ್ನಲ್ಲಿ 9 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.
ದತ್ತಾ ಅವರು ತಮ್ಮ ಜೇಮಶೇಡ್ಪುರದ ಡೀಲರ್ಸ್ ಹಾಸ್ಟೆಲ್ನಲ್ಲಿ ತಮ್ 24ನೇ ವಯಸ್ಸಿನಲ್ಲಿ ರತನ್ ಟಾಟಾ ಅವರನ್ನು ಭೇಟಿಯಾಗಿದ್ದರು. ಇವರಿಬ್ಬರಿಗೂ ಸುಮಾರು 60 ವರ್ಷದಿಂದ ಸ್ನೇಹವಿದೆ. ದತ್ತಾ ಅವರು ರತನ್ ಟಾಟಾ ಅವರೇ ನನ್ನನ್ನು ಬೆಳೆಸಿದ್ದು ಎಂದು ಹೇಳುತ್ತಾರೆ. ರತನ್ ಟಾಟಾ ಈಗ ಇವರ ಹೆಸರಿಗೆ ಸುಮಾರು 500 ಕೋಟಿ ರೂಪಾಯಿಯ ಸಂಪತ್ತು ನೀಡಬೇಕು ಎಂದು ಉಯಿಲ್ನಲ್ಲಿ ಉಲ್ಲೇಖಿಸಿದ್ದಾರೆ. ‘