ಬಂಟ್ವಾಳ: ಬಂಟ್ವಾಳ ವಲಯದ ಒಕ್ಕೂಟ ದ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರವನ್ನು ಜಿಲ್ಲಾ ನಿರ್ದೇಶಕರಾದ ಮಹಾಬಲ ಕುಲಾಲ್ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.
ಒಕೂಟದ ಸಭೆಯ ನಿಯಮ, ಯೋಜನೆಯ ಕಾರ್ಯಕ್ರಮ, ಸೌಲಭ್ಯದ ಬಗ್ಗೆ ಮತ್ತು ಪದಾಧಿಕಾರಿಗಳ ಜವಾಬ್ದಾರಿ ಬಗ್ಗೆ ತಿಳಿಸಿದರು. ಸಭೆಯಲ್ಲಿ ಯೋಜನಾಧಿಕಾರಿ ಮಾಧವ ಗೌಡ, ವಲಯದ ಒಕ್ಕೂಟ ಅಧ್ಯಕ್ಷರು, ಪದಾಧಿಕಾರಿಗಳು, ಸೇವಾಪ್ರತಿನಿದಿಗಳು ಉಪಸ್ಥಿತರಿದ್ದರು.