ಮಂಜೇಶ್ವರ: ವರ್ಕಾಡಿ ಶ್ರೀ ಮಡಿಕತ್ತಾಯ ಧೂಮಾವತಿ ಬಂಟ ದೈವಸ್ಥಾನ ಮತ್ತು ರೋಟರಿ ಕ್ಲಬ್ ದೇರಳಕಟ್ಟೆ ಇದರ ಸಹಯೋಗದಲ್ಲಿ ವನ ಮಹೋತ್ಸವದ ಪ್ರಯುಕ್ತ ಜು.30ರಂದು ಬೆಳಿಗ್ಗೆ ಮಡಿಕ ಅಂಕದಕಲ ದೈವಸ್ಥಾನ ಮತ್ತು ದೈವಗಳ ಭಂಡಾರಮನೆಯ ಸುತ್ತಮುತ್ತಲು ಹಲವಾರು ಹಣ್ಣುಹಂಪಲು ಮತ್ತು ಮರಮಟ್ಟುಗಳ ಗಿಡಗಳನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ನ ಅಧ್ಯಕ್ಷ ರೋಟೇರಿಯನ್ ಲತಾ ವಿಕ್ರಂ, ಅಸಿಸ್ಟೆಂಟ್ ಗವರ್ನರ್ ಪಿ.ಡಿ.ಶೆಟ್ಟಿ, ಸದಸ್ಯರಾದ ಡಾ.ಅನಂತಕೃಷ್ಣ, ವಾಣಿ ಲೋಕಯ್ಯ, ಶೋಭಾ ಶೆಟ್ಟಿ, ಜೆ.ಪಿ.ರೈ, ಗಿರೀಶ್ ಆಳ್ವ ಮೋರ್ಲ, ಸಂಗೀತ ಅನಂತಕೃಷ್ಣ, ಸುಜಾತ ಪಿ.ಡಿ.ಶೆಟ್ಟಿ, ಕ್ಷೇತ್ರದ ಆಡಳಿತ ಮೊಕ್ತೇಸರ ಐತಪ್ಪ ಶೆಟ್ಟಿ ದೇವಂದಪಡ್ಪು, ಮತ್ತು ಸಹ ಮೊಕ್ತೇಸರಾದ ವಾಸುದೇವ ಹೊಳ್ಳ ಮರಿಕಾಪು, ಪ್ರಭಾಕರ್ ರೈ ಕಲ್ಪನೆ, ಸೀತಾರಾಮ್ ಬೇರಿಂಜ ಹಾಗೂ ಚಾವಡಿಬೈಲು ಗುತ್ತು ದೇವಪ್ಪ ಶೆಟ್ಟಿ, ಕ್ಷೇತ್ರದ ಸೇವಾ ಸಮಿತಿಯ ಸದಸ್ಯರು ಮತ್ತಿತರರು ಹಾಜರಿದ್ದರು.