‘ಡೆವಿಲ್’ ಸಿನಿಮಾಕ್ಕೆ ಸೆನ್ಸಾರ್ ಮಂಡಳಿಯು ಇಂದು ‘ಯು/ಎ’ ಪ್ರಮಾಣ ಪತ್ರವನ್ನು ನೀಡಿದೆ. 16 ವರ್ಷದ ಮೇಲಿನವರು ಸಿನಿಮಾ ನೋಡಬಹುದಾಗಿದೆ.

ಇನ್ನು ‘ಡೆವಿಲ್’ ಸಿನಿಮಾದ ಒಟ್ಟು ರನ್ಟೈಂ ಅಂದರೆ ಒಟ್ಟು ಸಿನಿಮಾದ ಅವಧಿ 2 ಗಂಟೆ 49 ನಿಮಿಷಗಳು ಇದೆ. ಕೆಲ ಮೂಲಗಳ ಪ್ರಕಾರ, ‘ಡೆವಿಲ್’ ಸಿನಿಮಾ ಈಗಾಗಲೇ ಯುಎಫ್ಓಗೆ ಅಪ್ಲೋಡ್ ಆಗಿದ್ದು, ಇದೀಗ ಅದಕ್ಕೆ ಪ್ರಮಾಣ ಪತ್ರವನ್ನು ಸಹ ಅಟ್ಯಾಚ್ ಮಾಡಲಾಗುತ್ತಿದೆ. ಆ ಮೂಲಕ ಸಿನಿಮಾ ಯಾವುದೇ ಅಡ್ಡಿ-ಆತಂಕ ಇಲ್ಲದೆ ನಾಳೆಯೇ (ಡಿ. 11) ಬಿಡುಗಡೆ ಆಗಲಿದೆ.




