ಸುಳ್ಯ: ತಾಲೂಕಿನ ಪಂಜದ ಕರಿಕ್ಕಳ ಮನೆಯೊಂದರ ಹಟ್ಟಿಯಲ್ಲಿದ್ದ ದನದ ಹಾಲನ್ನು ಕದ್ದು ಕರೆಯುತ್ತಿದ್ದ
ಮಹಿಳೆಯೊಬ್ಬರು ಸಿಕ್ಕಿ ಬಿದ್ದ ಘಟನೆ ನಡೆದಿದೆ.
ಹಲವು ವರ್ಷಗಳಿಂದ ಕರಿಕ್ಕಳದ ಮನೆಯೊಂದರಲ್ಲಿ ಮಹಿಳೆಯೊಬ್ಬರು ಹಾಲು ಕರೆಯುವ ಕೆಲಸಕ್ಕಿದ್ದು, ಅವರೇ ಡೈರಿಗೆ ಹಾಲು ಕೊಂಡೊಯ್ಯುತಿದ್ದರು. ಇತ್ತೀಚೆಗೆ ಆ ಮಹಿಳೆ ನಾಲ್ಕೈದು ದಿವಸ ರಜೆ ಮಾಡಿದ್ದರು. ಈ ಸಮಯದಲ್ಲಿ ಹಾಲು ಕರೆಯುವ ಕೆಲಸಕ್ಕೆ ಬೇರೊಂದು ವ್ಯಕ್ತಿಯನ್ನು ಮನೆಯವರು ನೇಮಿಸಿದ್ದರು. ಆದರೆ ಹೊಸದಾಗಿ ನೇಮಕಗೊಂಡ ಕರೆಯುವವನಿಗೆ ದಿನನಿತ್ಯ ಸಿಗುವಷ್ಟು ಹಾಲು ಸಿಗುತ್ತಿರಲಿಲ್ಲ. ಹೊಸದಾಗಿ ಸೇರಿದಾತ ದನದ ಕೆಚ್ಚಲು ಮಾಮೂಲಿನಂತೆ ಇರುವುದಿಲ್ಲ ಯಾರೋ ಹಾಲು ಕರೆಯುತ್ತಿದ್ದಾರೆಂದು ದನದ ಮಾಲಕರಲ್ಲಿ ತಿಳಿಸಿದ್ದರು. ಇದನ್ನು ಆಧರಿಸಿ ಮನೆಯವರು ಹಟ್ಟಿಗೆ ಸಿ.ಸಿ ಕ್ಯಾಮರಾ ಅಳವಡಿಸಿದ್ದು, ಪರಿಶೀಲನೆ ಮಾಡಿದಾಗ ಬೆಳಗಿನ ಜಾವ 4-5 ಗಂಟೆಗೆ ಮಹಿಳೆಯೊಬ್ಬರು ಬಂದು ದನದ ಕೆಚ್ಚಲಿನಿಂದ ಅರ್ಧ ಹಾಲು ಕರೆದು ಹೋಗುತ್ತಿರುವ ದೃಶ್ಯ ಕಂಡುಬಂದಿದೆ. ಬಳಿಕ ಮಾಲೀಕರು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.