ಉಪ್ಪಳ: ಮೂಡಂಬೈಲು ಸರಕಾರಿ ಶಾಲೆಯಲ್ಲಿ ಕಲಿಕೋತ್ಸವ

Share with

ಮಂಜೇಶ್ವರ: ಮೂಡಂಬೈಲು ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಕಲಿಕೋತ್ಸವವನ್ನು ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯೆ ಕಮಲಾಕ್ಷಿ ಉದ್ಘಾಟಿಸಿದರು.

ಮೂಡಂಬೈಲು ಸರಕಾರಿ ಶಾಲೆಯಲ್ಲಿ ಕಲಿಕೋತ್ಸವ

ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಕುಂಞ ಪಜಿಂಗಾರ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕ ಜಾರ್ಜ್ ಕ್ರಾಸ್ತಾ ಹಾಗೂ ಹಿರಿಯ ಅಧ್ಯಾಪಕಿ ದಯಾವತಿ ಸಾಲಿಯಾನ್ ಶುಭಾಶಂಸನೆಗೈದರು. ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ರಾಜಲಕ್ಷ್ಮಿ ಉಪಸ್ಥಿತರಿದ್ದರು.

ನಂತರ ವಿದ್ಯಾರ್ಥಿಗಳಿಂದ ವಿವಿಧ ಕಲಿಕಾ ಚಟುವಟಿಕೆಗಳನ್ನು ವೇದಿಕೆಯಲ್ಲಿ ನಡೆಸಿದರು. ಶಿಕ್ಷಕಿ ಮೋಹಿನಿ ಸ್ವಾಗತಿಸಿ ಅಧ್ಯಾಪಕಿ ಪ್ರಿಯಾ ವಂದಿಸಿದರು. ಶಿಕ್ಷಕಿ ದೀಕ್ಷಾ ನಿರೂಪಿಸಿದರು. ಶಿಕ್ಷಕರಾದ ಬುಶ್ರಾ, ಮೊಯಿದೀನ್ ಲತೀಫ್, ರೆಹನಾ ಹಾಗೂ ಸೌಮ್ಯ ನೇತೃತ್ಪವನ್ನು ನೀಡಿದರು.


Share with

Leave a Reply

Your email address will not be published. Required fields are marked *