
ಮಹಾಕುಂಭ ಮೇಳದಲ್ಲಿ ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಮೊದಲ ರಾಜ ಸ್ನಾನದ ಸಮಯದಲ್ಲಿ ಸಂತರು ಸೇರಿದಂತೆ 3.50 ಕೋಟಿ ಭಕ್ತರು ಸಂಗಮದಲ್ಲಿ ಸ್ನಾನ ಮಾಡಿದ್ದಾರೆ.

ಭಕ್ತರು ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಈ ಬಾರಿಯ ಮಹಾಕುಂಭ ಮೇಳದ ಮೂರು ‘ಅಮೃತ ಸ್ನಾನ’ಗಳಲ್ಲಿ (ಶಾಹೀ ಸ್ನಾನ) ಇದು ಮೊದಲನೆಯದು.
12 ವರ್ಷಗಳ ಬಳಿಕ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಸೋಮವಾರ ‘ಪುಷ್ಯ ಪೂರ್ಣಿಮಾ’ ದಿನದಂದು ಮೊದಲ ‘ಸ್ನಾನ’ ನಡೆದಿತ್ತು.




