ನೋಯಿಡಾ: ದೇಶದ ಆರ್ಥಿಕತೆ ಹೆಚ್ಚು ಹೆಚ್ಚಾಗಿ ಬಲಗೊಂಡಂತೆ ತೆರಿಗೆ ಹೊರೆ ಮತ್ತಷ್ಟು ಇಳಿಕೆಯಾಗಲಿದೆ ಎಂದು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದು, ತೆರಿಗೆ ಸುಧಾರಣೆಯು ನಿರಂತರ ಪ್ರಕ್ರಿಯೆ ಎಂದು ಪ್ರತಿಪಾದಿಸಿದ್ದಾರೆ.

ಉತ್ತರ ಪ್ರದೇಶದ ನೋಯ್ದಾದಲ್ಲಿ ನಡೆದ ಅಂತಾರಾಷ್ಟ್ರೀಯ ವ್ಯಾಪಾರ ಪ್ರದರ್ಶನದಲ್ಲಿ ಮಾತನಾಡಿದ ಅವರು, 2017ರಲ್ಲಿ ತೆರಿಗೆ ನೀತಿಯನ್ನು ಜಾರಿಗೊಳಿಸುವುದರ ಮೂಲಕ ಬಿಜೆಪಿ ಸರಕಾರವು ತೆರಿಗೆ ವ್ಯವಸ್ಥೆಯಲ್ಲಿ ಪರೋಕ್ಷವಾಗಿ ಸುಧಾರಣೆಗಳನ್ನು ಪರಿಚಯ ಮಾಡಿಸಿದ್ದು, ದೇಶದ ಆರ್ಥಿಕತೆ ಹೆಚ್ಚಳಕ್ಕೆ ಪುಷ್ಟಿ ನೀಡಿ ದಂತಿತ್ತು. ಅದೇ ರೀತಿ ಇತ್ತೀಚೆಗೆ ತಂದ ತೆರಿಗೆ ಸುಧಾರಣೆಗಳು ಭಾರತದ ಬೆಳವಣಿಗೆಗೆ ಹೊಸ ರೆಕ್ಕೆಗಳನ್ನು ನೀಡುತ್ತಿವೆ.
ಈ ತೆರಿಗೆ ಸುಧಾರಣೆ ಇಲ್ಲಿಗೆ ಸ್ಥಗಿತಗೊಳಿಸುವುದಿಲ್ಲ. ದೇಶದ ಆರ್ಥಿಕತೆ ಇನ್ನಷ್ಟು ವೃದ್ಧಿಯಾದರೆ ತೆರಿಗೆ ಹೊರೆಯನ್ನು ಮತ್ತಷ್ಟು ಇಳಿಸಲಾಗುತ್ತದೆ. ದೇಶದ ಜನರ ಆಶೀರ್ವಾದದಿಂದ ಇನ್ನಷ್ಟು ಸುಧಾರಣೆಗೊಳ್ಳಲಿದೆ ಎಂದು ಹೇಳಿದ್ದಾರೆ. ಇದೇ ವೇಳೆ, ತೆರಿಗೆ ಸುಧಾರಣೆ 2.0 ಅಡಿ, 12 ಲಕ್ಷದವರೆಗೂ ತೆರಿಗೆ ವಿನಾಯಿತಿ ನೀಡಲಾಗಿದೆ ಎಂದು ಮೋದಿ ಪುನರುಚ್ಚರಿಸಿದ್ದಾರೆ.




