ಎಲೆಕ್ಟ್ರಿಕ್ ವಾಹನಗಳಿಗೆ ಸ್ಪೀಕ‌ರ್ ಕಡ್ಡಾಯಗೊಳಿಸಿದ ಕೇಂದ್ರ ಸರಕಾರ

Share with

ಹೊಸದಿಲ್ಲಿ: ಎಲೆಕ್ಟಿಕ್ ವಾಹನಗಳು ಚಲಿಸುತ್ತಿರುವುದು ಪಾದಚಾರಿಗಳು ಮತ್ತು ಇತರ ವಾಹನ ಚಾಲಕರ ಗಮನಕ್ಕೆ ಬರುವಂತೆ ಮಾಡಲು ಎಲೆಕ್ಟ್ರಿಕ್ ವಾಹನಗಳಿಗೆ ಸ್ಪೀಕ‌ರ್ ಅಳವಡಿಕೆಗೆ ಕೇಂದ್ರ ಸರಕಾರ ಮುಂದಾಗಿದೆ. ಇದಕ್ಕಾಗಿ ಕರಡು ನಿಯಮವನ್ನು ಬಿಡುಗಡೆ ಮಾಡಿದ್ದು, 2027ರ ಅ.1ರಿಂದ ಎಲ್ಲ ವಾಹನಗಳಿಗೆ ಇದನ್ನು ಕಡ್ಡಾಯ ಮಾಡಲಾಗುವುದು ಎಂದು ತಿಳಿಸಿದೆ.

ಎಲೆಕ್ಟಿಕ್ ವಾಹನಗಳು ಯಾವುದೇ ಶಬ್ದವಿಲ್ಲದೇ ಚಲಿಸುವುದರಿಂದ ಇಂತಹ ವಾಹನಗಳು ಬರುವುದು ಇತರರಿಗೆ ತಿಳಿಯುವುದಿಲ್ಲ. ಹೀಗಾಗಿ ಈ ವಾಹನಗಳಲ್ಲಿ ಸ್ಪೀಕ‌ರ್ ಅಳವಡಿಸಿ, ವೇಗ ಕಡಿಮೆ ಇದ್ದಾಗ ಸಾಮಾನ್ಯ ಕಾರುಗಳು ಹೊಮ್ಮಿಸುವ ಎಂಜಿನ್ ಶಬ್ದವನ್ನು ಪ್ರಸಾರ ಮಾಡಲಾಗುತ್ತದೆ. ಇದರಿಂದ ಎಲೆಕ್ನಿಕ್ ವಾಹನಗಳು ಚಲಿಸುತ್ತಿರುವುದು ಎಲ್ಲರ ಗಮನಕ್ಕೆ ಬರಲಿದೆ.

2027ರಿಂದ ಕಡ್ಡಾಯ:

ಎಲ್ಲ ಮಾದರಿಯ ಎಲೆಕ್ಟಿಕ್ ವಾಹನಗಳಿಗೆ 2027ರ ಅ.1ರಿಂದ ಇಂತಹ ಸ್ಪೀಕ‌ರ್ ಅಳವಡಿಸುವುದನ್ನು ಕಡ್ಡಾಯ ಮಾಡಲಾಗಿದೆ. ಅದೇ ರೀತಿ 2026ರ ಅ.1ರ ಬಳಿಕ ಉತ್ಪಾದನೆಯಾಗುವ ವಾಹನಗಳಲ್ಲಿ ಈ ವ್ಯವಸ್ಥೆಯನ್ನು ಅಳವಡಿಕೆ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ.


Share with

Leave a Reply

Your email address will not be published. Required fields are marked *