ಈಶಾನ್ಯದ ಮಣಿಪುರ, ನಾಗಾಲ್ಯಾಂಡ್, ಅಸ್ಸಾಂ, ಮೇಘಾಲಯ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಇಂದು ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 5.2 ರಷ್ಟಿತ್ತು. ಭೂಕಂಪದ ಕೇಂದ್ರಬಿಂದು ಮಣಿಪುರದ ಕಾಲ್ಟಾಂಗ್‌ನಲ್ಲಿ, ಮೇಲ್ಮಯಿಂದ 62 ಕಿಲೋಮೀಟರ್ ಆಳದಲ್ಲಿದೆ.

ಇಂದು ಬೆಳಿಗ್ಗೆ 5:59 ಕ್ಕೆ ಭೂಕಂಪ ಸಂಭವಿಸಿದೆ. ಅದೃಷ್ಟವಶಾತ್, ಭೂಕಂಪದಿಂದ ಯಾವುದೇ ಜೀವ ಹಾನಿ ಅಥವಾ ಆಸ್ತಿ ನಷ್ಟ ಸಂಭವಿಸಿಲ್ಲ. ಆದರೆ ಜನರು ಭಯಭೀತರಾಗಿ ತಮ್ಮ ಮನೆಗಳಿಂದ ಹೊರಗೆ ಓಡಿರುವುದಾಗಿ ವರದಿಯಾಗಿದೆ.




