ಕೇದಾರನಾಥ್ ದರ್ಶನಕ್ಕೆ ಹೋಗುವವರು ದೇವಸ್ಥಾನ ಆವರಣದಲ್ಲಿ ಫೋಟೋ, ವಿಡಿಯೋಗಳನ್ನು ತೆಗೆದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಿರ್ವಹಣಾಧಿಕಾರಿಗಳು ತಿಳಿಸಿದ್ದಾರೆ.

ಕೇದಾರನಾಥ್ ಯಾತ್ರೆ ಆರಂಭವಾಗುತ್ತಿರುವ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಫೋನ್ ಬಳಕೆಯನ್ನು ನಿಷೇಧಿಸಲಾಗಿದೆ. ದೇವಸ್ಥಾನದ ಪವಿತ್ರತೆಯನ್ನು ಕಾಪಾಡಲು ಮತ್ತು ಭಕ್ತರಿಗೆ ಶಾಂತಿಯುತ ದರ್ಶನ ಮಾಡಲು ಈ ಸೀಸನ್‌ನಿಂದ ಈ ನಿಯಮಗಳನ್ನು ಜಾರಿಗೆ ತರಲಾಗಿದೆ.




