ಮಂಜೇಶ್ವರ ಬಿಆರ್‌ಸಿ ವತಿಯಿಂದ ‘ಕಲರವ’ ಶಿಬಿರ ಉದ್ಘಾಟನೆ

Share with

ಮಂಜೇಶ್ವರ: ಸಮಗ್ರ ಶಿಕ್ಷ ಕೇರಳ ಮತ್ತು ಕಾಸರಗೋಡು ಜಿಲ್ಲಾ ಪಂಚಾಯತು ಆಯೋಜಿಸುತ್ತಿರುವ ವೈವಿಧ್ಯ ಘಟ್ಟ 2 ರ ಭಾಗವಾಗಿ ಮಂಜೇಶ್ವರ ಬಿಆರ್‌ಸಿ ಯು ಆಯೋಜಿಸಿದ ಶಿಬಿರ “ಕಲರವ” ದ ಎರಡನೇ ದಿನ ಏ.21ರಂದು ಉದ್ಘಾಟನಾ ಕಾರ್ಯಕ್ರಮ ಹೆದ್ದಾರಿ ಎ ಯು ಪಿ ಶಾಲೆ ಬಾಯಾರ್ ನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಪೈವಳಿಕೆ ಪಂಚಾಯತ್ ಸದಸ್ಯರಾದ ಝಕಾರಿಯ ರವರ ಅಧ್ಯಕ್ಷತೆಯಲ್ಲಿ ಗೌರವಾನ್ವಿತ ಪೈವಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಬದರುನ್ನೀಸ ಸಲೀಂ ರವರು ಉದ್ಘಾಟನಾ ಕಾರ್ಯಕ್ರಮ ನಿರ್ವಹಿಸಿದರು. ಪೈವಳಿಕೆ ಪಂಚಾಯತ್ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಮಾನ ಜಿ ಭಟ್ ಹಾಗು ಶಾಲೆಯ ವ್ಯವಸ್ಥಾಪಕರಾದ ರಾಜೇಶ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಹಾರೈಸಿದರು. ಮಂಜೇಶ್ವರ ಬಿಆರ್‌ಸಿ ತರಬೇತುದಾರರಾದ ಸುಮಯ್ಯ ರವರು ಮೂರು ದಿನಗಳಲ್ಲಿ ನಡೆಯುವ ಚಟುವಟಿಕೆಗಳು ಹಾಗೂ ಕಾರ್ಯಕ್ರಮದ ರೂಪು ರೇಷೆಯನ್ನು ಪ್ರಾಸ್ತಾವಿಕ ನುಡಿಗಳೊಂದಿಗೆ ತಿಳಿಸಿದರು.

ಆದಿ ನಾರಾಯಣ ಭಟ್ ನಿವೃತ್ತ ಮುಖ್ಯೋಪಾಧ್ಯಾಯರು ಹೆದ್ದಾರಿ ಎ. ಯು. ಪಿ ಶಾಲೆ ಬಾಯಾರು ಹಾಗು ಶಾರದ ಸಿ ಆರ್ ಸಿ ಕಾರ್ಡಿನೇಟರ್ ಬಿ. ಆರ್.ಸಿ ಮಂಜೇಶ್ವರ ರವರು ಕಾರ್ಯಕ್ರಮ ದ ಬಗ್ಗೆ ಶುಭನುಡಿಗಳನ್ನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ವರದರಾಜ್ ಮತ್ತು ಪ್ರಕಾಶ್ ಬಿ ಆರ್ ಸಿ ಮಂಜೇಶ್ವರ ಇವರು ತರಗತಿ ನಡೆಸಿಕೊಟ್ಟರು. ಸಿ.ಆರ್‌. ಸಿ ಕಾರ್ಡಿನೇಟರ್ ಗಳಾದ ವಿಧ್ಯಾ ಹಾಗು ಪ್ರಸನ್ನ ಸಹಕರಿಸಿದರು. ಆಗಮಿಸಿದ ಅತಿಥಿಗಳನ್ನು ಸ್ಮಿತಾ ಮುಖ್ಯೋಪಾಧ್ಯಾಯಿನಿ ಹೆದ್ದಾರಿ ಎ. ಯು. ಪಿ ಶಾಲೆ ಬಾಯಾರು ಸ್ವಾಗತಿಸಿದರು. ಬಿ ಆರ್ ಸಿ ಮಂಚೇಶ್ವರ ಸಿ ಆರ್ ಸಿ ಕಾರ್ಡಿನೇಟರ್ ಯಾಸ್ಮಿನ್ ನಸ್ರೀನ್ ಧನ್ಯವಾದ ಗೈದರು. ಒಟ್ಟು 42 ಮಕ್ಕಳು ಶಿಬಿರದ ಪ್ರಯೋಜನ ಪಡೆದರು. ಲಘು ಉಪಹಾರ ಹಾಗು ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ಶಾಲೆಯವರು ನೀಡಿ ಸಹಕರಿಸಿದರು.


Share with

Leave a Reply

Your email address will not be published. Required fields are marked *