ಹಾರ್ಮುಜ್ ಜಲಸಂಧಿ ದಾಟಲು ಪ್ರಯತ್ನಿಸುತ್ತಿದ್ದ ಕಾರ್ಗೋ ನೌಕೆಗಳ ಮೇಲೆ ಇರಾನ್ ದಾಳಿ ಮುಂದುವರಿಸಿದೆ. ಇಂದು ಮತ್ತೆ 3 ನೌಕೆಗಳ ಮೇಲೆ IRGC ಗನ್ಬೋಟ್ ಮೂಲಕ ಗುಂಡಿನ ದಾಳಿ ನಡೆಸಲಾಗಿದೆ ಎಂದು UKMTO ಕೇಂದ್ರ ತಿಳಿಸಿದೆ.

ಅವುಗಳಲ್ಲಿ 2 ನೌಕೆಗಳನ್ನು IRGC ವಶಪಡಿಸಿಕೊಂಡಿರುವುದಾಗಿ ತಿಳಿದುಬಂದಿದೆ. ಅವುಗಳನ್ನು ತಮ್ಮ ಕರಾವಳಿ ಕಡೆಗೆ ಕರೆದೊಯ್ಯಲಾಗುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇವುಗಳಲ್ಲಿ ಗುಜರಾತ್ಗೆ ಬರುತ್ತಿದ್ದ ಒಂದು ನೌಕೆ ಕೂಡ ಇದ್ದುದಾಗಿ ಮಾಹಿತಿ ದೊರೆತಿದೆ.




