ಮನೆಯಲ್ಲಿ ಗ್ರಿಂಡರ್ನಿಂದ ವಿದ್ಯುತ್ ಹರಿದು 4 ವರ್ಷದ ಬಾಲಕಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಇಲ್ಲಿನ ಗುಂಡ್ಲುಪೇಟೆ ತಾಲೂಕಿನಲ್ಲಿ ಕಾಡಂಚಿನ ಗ್ರಾಮ ಕಲಿಗೌಡನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಪುಟ್ಟಮ ಹಾಗೂ ಆನಂದ ದಂಪತಿಯ ನಾಲ್ಕು ವರ್ಷದ ಪುತ್ರಿ ಅದ್ವಿತ ಮನೆಯಲ್ಲಿ ಡ್ರೈಂಡರ್ ಆನ್ ಇದ್ದಾಗ ವಿದ್ಯುತ್ ಹರಿದು ಸಾವನ್ನಪ್ಪಿದ್ದಾಳೆ. ತಮ್ಮ ಕಣ್ಣೆದುರೇ ಮಗಳ ಸಾವನ್ನು ಕಂಡು ಪೋಷಕರ ಆಕ್ರಂದನ ಇದೀಗ ಮುಗಿಲು ಮುಟ್ಟಿದೆ.




