ಚೆನ್ನೈ: ಅಂತರಾಷ್ಟ್ರೀಯ ಮಾದಕ ವ್ಯಸನ ವಿರೋಧಿ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಮ್ಯಾರಥಾನ್ನಲ್ಲಿ 6 ಕಿ.ಮೀ. ದೂರು ಓಡುವ ಮೂಲಕ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ದಾಖಲೆ ಬರೆದಿದ್ದಾರೆ.

ಜನಜಾಗೃತಿಗಾಗಿ ಇಷ್ಟು ದೂರ ಓಡಿದ ಮೊದಲ ಸಿಎಂ ಎನಿಸಿಕೊಂಡಿದ್ದಾರೆ. ಮರೀನಾ ಬೀಚ್ನ ಅಣ್ಣಾ ಸ್ಮಾರಕದ ಬಳಿ ಆಯೋಜಿಸಲಾಗಿದ್ದ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾದ ಅವರು, ಮ್ಯಾರಥಾನ್ನಲ್ಲಿ ಭಾಗಿಯಾಗಿದ್ದ ಎಲ್ಲರಿಗೂ ಇನ್ನು ‘ಮಾದಕವಸ್ತು ಬಳಸುವುದಿಲ್ಲ’ ಎಂಬ ಪ್ರತಿಜ್ಞಾವಿಧಿ ಬೋಧಿಸಿದರು.
ಅಲ್ಲದೆ ಮಾದಕವಸ್ತು ಜಾಲ ಭೇದಿಸುವ ಪೊಲೀಸರಿಗೆ ಮುಂದಿನ ದಿನಗಳಲ್ಲಿ ‘ಪೊಲೀಸ್ ಪದಕ’ ನೀಡುವುದಾಗಿ ಘೋಷಿಸಿದರು.




