ಸರ್ಕಾರಿ ನೌಕರರ ಗೈರುಹಾಜರಿ ತಡೆಯಲು ಮೇ1 ರಿಂದ ಜಾರಿಗೆ ತಂದಿರುವ ಕಡ್ಡಾಯ ಆನ್ಲೈನ್ ಹಾಜರಾತಿ ವ್ಯವಸ್ಥೆಗೆ ರಾಜ್ಯದ ನೌಕರರಿಂದ ವಿರೋಧ ವ್ಯಕ್ತವಾಗಿದೆ. ಮೊಬೈಲ್ ಆ್ಯಪ್ ಮೂಲಕ ಜಿಯೋ ಫೆನ್ಸ್ ಆಧಾರಿತ ಚೆಕ್-ಇನ್, ಚೆಕ್-ಔಟ್ ಮಾಡುವುದು ಕಡ್ಡಾಯವಾಗಿದೆ.

ಆದರೆ, ಇದಕ್ಕೆ RDPR & ಅಬಕಾರಿ ಇಲಾಖೆ ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕ್ಷೇತ್ರ ಕಾರ್ಯ ನಿರ್ವಹಿಸುವ PDOಗಳಿಗೆ ಇದು ಕಠಿಣ ಸವಾಲು ಎಂದು PDOಗಳ ಸಂಘವು ಸಚಿವ ಕೃಷ್ಣ ಬೈರೇಗೌಡರಿಗೆ ಪತ್ರ ಬರೆದು ನಿಯಮದಿಂದ ವಿನಾಯಿತಿ ಕೋರಿದೆ.




