ಕಾಸರಗೋಡು: ಹಲವು ಹೋಟೆಲ್‌ಗಳಿಂದ ಹಳಸಿದ ಆಹಾರ ವಶ..! ನಗರಸಭೆ ಅಧಿಕಾರಿಗಳ ದಾಳಿ, ನೋಟಿಸ್..!!

Share with

ಕಾಸರಗೋಡು ನಗರಸಭೆಯ ಆರೋಗ್ಯ ವಿಭಾಗದ ಅಧಿಕಾರಿಗಳು ನಡೆಸಿದ ತಪಾಸಣೆಯಲ್ಲಿ ಹಲವು ಹೋಟೆಲ್‌ಗಳಿಂದ ಹಳಸಿದ ಹಾಗೂ ಮಾನವ ಬಳಕೆಗೆ ಯೋಗ್ಯವಲ್ಲದ ಆಹಾರ ಪದಾರ್ಥಗಳನ್ನು ವಶಪಡಿಸಿಕೊಂಡು ನಾಶಪಡಿಸಿದ್ದಾರೆ.

ಓಷನ್ ಸೀ ಫುಡ್, ಲೆ ಬಾಂಬೂ ರೆಸ್ಟೋರೆಂಟ್, ಹೋಟೆಲ್ ಡೀಲಕ್ಸ್ ಹಾಗೂ ಚಾಯ ಕಥಾ ಸೇರಿದಂತೆ ವಿವಿಧ ಆಹಾರ ಮಳಿಗೆಗಳಲ್ಲಿ ಪರಿಶೀಲನೆ ನಡೆಸಿ, ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಸಂಗ್ರಹಿಸಲಾಗಿದ್ದ ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಗ್ಯ ನಿರೀಕ್ಷಕ ಮಧು ಕೆ. ಅವರ ನೇತೃತ್ವದಲ್ಲಿ ಪಿಎಚ್‌ಐಗಳಾದ ಶೀನಾ, ವೈಶಾಖ್, ಮುಬಶಿರಾ ಹಾಗೂ ನೌಫಿಯಾ ಅವರ ತಂಡ ಈ ಕಾರ್ಯಾಚರಣೆ ನಡೆಸಿತು.

ನಿಯಮ ಉಲ್ಲಂಘಿಸಿದ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮುಂದಿನ ದಿನಗಳಲ್ಲಿ ತಪಾಸಣೆಯನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *