![](https://i0.wp.com/veekshakavani.com/wp-content/uploads/2023/09/ವಾಣಿಜ್ಯ-ಮಳಿಗೆಯೊಂದರ-ಇಲೆಕ್ಟ್ರಾನಿಕ್-ಅಂಗಡಿಯೊಂದಕ್ಕೆ-ಬೆಂಕಿ.jpg?resize=640%2C400&ssl=1)
ಬಂಟ್ವಾಳ: ಬಂಟ್ವಾಳ ಪೇಟೆಯ ಬಡ್ಡಕಟ್ಟೆಯಲ್ಲಿರುವ ಪುರಸಭಾ ವಾಣಿಜ್ಯ ಮಳಿಗೆಯೊಂದರ ಇಲೆಕ್ಟ್ರಾನಿಕ್ ಅಂಗಡಿಯೊಂದಕ್ಕೆ ಸೆ.೧೯ ರಂದು ಆಕಸ್ಮಿಕವಾಗಿ ಬೆಂಕಿ ತಗುಲಿ, ಹಲವು ಸೊತ್ತುಗಳು ಸುಟ್ಟುಹೋಗಿವೆ ಎಂದು ಹೇಳಲಾಗಿದೆ. ಬಳಿಕ ಅಗ್ನಿಶಾಮಕ ಸಿಬಂದಿ ಸ್ಥಳೀಯರೊಂದಿಗೆ ಸೇರಿ ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ ಎಂದು ತಿಳಿದು ಬಂದಿದೆ.
ಅಂಗಡಿಯಲ್ಲಿದ್ದ ಸುಮಾರು ಲಕ್ಷಾಂತರ ರೂಪಾಯಿ ಬೆಲೆಬಾಳುವ ಟಿ.ವಿ ಸಹಿತ ಅನೇಕ ಗೃಹ ಉಪಯೋಗಿ ವಸ್ತುಗಳು ಸುಟ್ಟು ಹೋಗಿದೆ ಎಂದು ಹೇಳಲಾಗಿದ್ದು, ಸ್ಥಳಕ್ಕೆ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ.