ಬಂಟ್ವಾಳ: ವೃದ್ಧ ದಂಪತಿಗೆ ಮನೆಲ ಚರ್ಚ್ ಪ್ರಧಾನ ಧರ್ಮ ಗುರುವಿನಿಂದ ಹಲ್ಲೆ

Share with

ಬಂಟ್ವಾಳ: ವೃದ್ಧ ದಂಪತಿಗೆ ಮನೆಲ ಚರ್ಚ್ ಪ್ರಧಾನ ಧರ್ಮಗುರು ಹಲ್ಲೆ ಮಾಡಿರುವ ಘಟನೆ ಫೆ.29ರಂದು ನಡೆದಿದೆ ಎಂದು ವರದಿಯಾಗಿದೆ.

ವೃದ್ಧ ದಂಪತಿಗೆ ಮನೆಲ ಚರ್ಚ್ ಪ್ರಧಾನ ಧರ್ಮಗುರು ಹಲ್ಲೆ

ಚರ್ಚ್ ಧರ್ಮಗುರು ಫಾ.ನೆಲ್ಸನ್ ಓಲಿವೆರಾರವರು ಪುಣಚ ಗ್ರಾಮದ ಎರ್ಮೆತ್ತಡ್ಕ ನಿವಾಸಿ ಗ್ರೆಗರಿ ಮೊಂತೇರೊ(79ವ.) ದಂಪತಿ ಮನೆಗೆ, ವಾರ್ಷಿಕ ಮನೆ ಪ್ರಾಥನೆ ನಿಮಿತ್ತ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಈ ಸಂದರ್ಭದಲ್ಲಿ ಧರ್ಮಗುರು ಫಾ.ನೆಲ್ಸನ್ ರವರು ಪ್ರಾಯಸ್ಥ ದಂಪತಿ ಚರ್ಚ್ ಗೆ ಯಾವುದೇ ದೇಣಿಗೆ, ವಂತಿಗೆ ನೀಡದೆ ಸಹಕರಿಸುತ್ತಿಲ್ಲ ಎಂದೆಲ್ಲ ಹೇಳಿ ಆ ದಂಪತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದ್ದು ಕಾಲರ್ ಹಿಡಿದು ಮಾರುದ್ಧ ದೂರ ಎಳೆದುಕೊಂಡು ಹೋಗಿ ಹೊಡೆಯುತ್ತಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.


Share with

Leave a Reply

Your email address will not be published. Required fields are marked *