ಅಕ್ಷಯ ಕಾಲೇಜ್ : ಹಳೇ ವಿದ್ಯಾರ್ಥಿ ಸಂಘದ ಉದ್ಘಾಟನೆ. ಅಧ್ಯಕ್ಷರಾಗಿ ಪೃಶಾಂತ ಪೂವಜೆ ಆಯ್ಕೆ

Share with

ಹಳೇ ವಿದ್ಯಾರ್ಥಿ ಸಂಘದ ಉದ್ಘಾಟನೆ ಯನ್ನು ಪೂರ್ವ ವಿದ್ಯಾರ್ಥಿ ಶ್ರೀ ಚಂದ್ರಶೇಖರ ಕಿಲಾರ್ ಕಜೆ ನಿರ್ವಹಿಸಿ ಅಕ್ಷಯ ಕಾಲೇಜ್ ತನ್ನ
ಪೂರ್ವದಲ್ಲಿ ಶ್ರೀಯುತ ದಿ. ಆನಂದ ಆಚಾರ್ಯ ಅವರು ಸ್ಥಾಪಿಸಿದ ಗ್ಲೋರಿಯಾ ಎಂಬ ಸಂಸ್ಥೆ ಯನ್ನು ಮುನ್ನಡೆಸಿದ ಮತ್ತು ಕಟ್ಟಿ
ಬೆಳೆಸಿದ ಕೀರ್ತಿ ಶ್ರೀಯುತ ಜಯಂತ್ ನಡುಬೈಲ್ ಅವರಿಗೆ ಸಲ್ಲುತ್ತದೆ . ಪುತ್ತೂರಿನಲ್ಲಿ ವಿದ್ಯಾಭ್ಯಾಸ ಕ್ಷೇತ್ರಕ್ಕೆ ಶ್ರೀಯುತ ದಿ.
ಆನಂದ ಆಚಾರ್ಯ ಕೊಟ್ಟ ಕೊಡುಗೆ,ಅವರ ನೆನಪು ಮತ್ತು ಸಾಧನೆ ಸದಾ ಜೀವಂತವಾಗಿದೆ. ಹಳೇ ವಿದ್ಯಾರ್ಥಿ ಸಂಘ ಮುಂದಿನ ಯುವ
ಪೀಳಿಗೆಗೆ ಸಹಕಾರ ಕೊಟ್ಟು ಮಾರ್ಗದರ್ಶಿಯಾಗಲಿದೆ. ತಮ್ಮ ಪದವಿ ಜೀವನವನ್ನು ಸ್ಮರಿಸುತ್ತಾ , ಅನುಭವವನ್ನು ಹಂಚಿಕೊಂಡು
ಯುವ ಜನತೆಗೆ ಪ್ರೇರೇಪಣೆ ನೀಡಿ ಪ್ರೋತ್ಸಾಹಿಸಿದರು .

ಮುಖ್ಯ ಅತಿಥಿಯಾಗಿ ಮಾತನಾಡಿದ ಶ್ರೀಮತಿ ಮೊನೀಶಾ ಹಳೇ ವಿದ್ಯಾರ್ಥಿ ಸಂಘದ ಸ್ಥಾಪನೆ ಒಂದು ಮೈಲಿಗಲ್ಲು ಆಗಲಿದೆ. ಮುಂದಿನ
ದಿನಗಳಲ್ಲಿ ಅಕ್ಷಯ ಕಾಲೇಜ್ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನು ನಿರ್ಮಿಸಲಿದೆ ಅದಕ್ಕೆ ಹಳೇ ವಿದ್ಯಾರ್ಥಿ ಸಂಘವು ಧನಾತ್ಮಕವಾಗಿ
ಕಾರ್ಯ ನಿರ್ವಹಿಸಲಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪೂರ್ವ ವಿದ್ಯಾರ್ಥಿ ಶ್ರೀ ಶಮಂತ್ ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗಳಿಗೆ ಚಿರಋಣ
ಹೊಂದಿದ್ದಾರೆ , ತಮ್ಮ ಜೀವನದ ಮೌಲ್ಯಗಳನ್ನು, ಲಕ್ಷ್ಯ ಗಳನ್ನು ನಿರ್ಣಯಿಸುವಲ್ಲಿ ಶಿಕ್ಷಣ ಸಂಸ್ಥೆಗಳ ಮೂಲಕ ಉಪನ್ಯಾಸಕರ
ಮಾರ್ಗದರ್ಶನ ಅವಿಸ್ಮರಣೀಯ. ಈ ನಿಟ್ಟಿನಲ್ಲಿ ಹಳೇ ವಿದ್ಯಾರ್ಥಿಗಳ ಒಕ್ಕೂಟ ವು ಸಂಸ್ಥೆಯ ಯಶಸ್ವಿಗೆ ಬದ್ಧವಾಗಿದೆ ಎಂದು
ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಅಧ್ಯಕ್ಷರಾದ ಶ್ರೀಯುತ ಜಯಂತ್ ನಡುಬೈಲ್ ಮಾತನಾಡಿ ಹಳೆ ವಿದ್ಯಾರ್ಥಿ
ಸಂಘವು ಶಿಕ್ಷಣ ಸಂಸ್ಥೆಯ ಅವಿಭಾಜ್ಯ ಅಂಗ ಮಾತ್ರವಲ್ಲ ಸಂಸ್ಥೆಯ ಯಶಸ್ವಿಗೆ ಮತ್ತು ಕೀರ್ತಿಯನ್ನು ಉತ್ತುಂಗಕ್ಕೆ ತಲುಪಿಸುವ
ನಿಟ್ಟಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಸಂಸ್ಥೆ ಹಳೇ ವಿದ್ಯಾರ್ಥಿಗಳಿಗೆ ವೇದಿಕೆಯನ್ನು ನಿರ್ಮಿಸಿದೆ. ಸಂಘದ ನಿಕಟ ಪೂರ್ವ
ಬಾಂಧವ್ಯ ಹೊಸ ತಲೆಮಾರಿಗೆ ಮಾರ್ಗದರ್ಶನವಾಗಲಿ ಎಂದು ಹಾರೈಸಿದರು.


ಪ್ರಾಂಶುಪಾಲ ರಾದ ಶ್ರೀ ಸಂಪತ್ ಕೆ ಪಕ್ಕಳ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಹಳೇ ವಿದ್ಯಾರ್ಥಿಗಳಿಗೆ ತಮ್ಮ ಸಂಸ್ಥೆಯ ಸಂಬಂಧ , ನಿಕಟ
ಬಾಂಧವ್ಯ ಬೆಳೆಯಲು ಹಳೇ ವಿದ್ಯಾರ್ಥಿಗಳ ಸಂಘದಿಂದ ಮಾತ್ರ ಸಾಧ್ಯ. ಅಕ್ಷಯ ಕಾಲೇಜ್ ಪೂರ್ವ ವಿದ್ಯಾರ್ಥಿಗಳಿಗೆ ವೇದಿಕೆಯನ್ನು
ಒದಗಿಸಿದೆ . ಮುಂದಿನ ದಿನಗಳಲ್ಲಿ ಸಾಕಷ್ಟು ಅವಕಾಶಗಳು ಸಂಸ್ಥೆಯ ಮತ್ತು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಲ್ಲಿ ಹೊಸ
ಅಧ್ಯಾಯ ಸೃಷ್ಟಿ ಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಆಡಳಿತಾಧಿಕಾರಿ ಶ್ರೀ ಅರ್ಪಿತ್ ಟಿ. ಎ ಮಾತನಾಡಿ ಸಂಸ್ಥೆಯು ಬೆಳೆಯಲು ಹಳೇ ವಿದ್ಯಾರ್ಥಿಗಳ ಒಕ್ಕೂಟದ ಸಹಕಾರ
ಅತ್ಯಗತ್ಯ,ತಮ್ಮ ಮಾತೃ ಸಂಸ್ಥೆ ಯಿಂದ ಪದವಿ ಪಡೆದು ಹೊರ ಬರುವ ವಿದ್ಯಾರ್ಥಿಗಳಿಗೆ ಉದ್ಯೋಗ ಗಿಟ್ಟಿಸುವಲ್ಲಿ ಹಳೇ
ವಿದ್ಯಾರ್ಥಿಗಳು ಶ್ರಮವಹಿಸಬೇಕು ಆ ಮೂಲಕ ತಮ್ಮ ಸಂಸ್ಥೆಯ ಮುಂಬರುವ ವಿದ್ಯಾರ್ಥಿಗಳಿಗೆ ಪ್ರೇರಣೆ ಮತ್ತು ಜೀವನದ ದಾರಿ ದೀಪ
ವಾಗಬೇಕು ಎಂದು ತಮ್ಮ ಇಂಗಿತವನ್ನು ವ್ಯಕ್ತಪಡಿಸಿದರು.
ಆಡಳಿತ ನಿರ್ದೇಶಕಿ ಶ್ರೀಮತಿ ಕಲಾವತಿ ಜಯಂತ್ ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲರಾದ ಶ್ರೀಯುತ ರಕ್ಷಣ್ ಟಿ ಆರ್ ಸ್ವಾಗತಿಸಿ
ನೂತನ ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶ್ರೀಮತಿ ಮೊನೀಷಾ ವಂದಿಸಿದರು. ಕುಮಾರಿ ಪ್ರಕೃತಿ ಪ್ರಾರ್ಥನೆ ಹಾಡಿದರು, ಬಿ ಎಚ್ ಎಸ್ ವಿಭಾಗದ ಉಪನ್ಯಾಸಕಿ ಶ್ರುತ ನಿರೂಪಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಹಳೇ ವಿದ್ಯಾರ್ಥಿಗಳು ಭಾಗವಹಿಸಿ ಹೊಸ ಸಂಘ ಕ್ಕೆ ಸಾಥ್ ನೀಡಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.


ನೂತನ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಶ್ರೀ ಪ್ರಶಾಂತ್ ಪೂವಾಜೆ, ಉಪಾಧ್ಯಕ್ಷರಾಗಿ ಶ್ರೀ ಸ್ವರೂಪ್ ರೈ, ಚಂದ್ರಹಾಸ ಕಿಲಾರ್ ಕಜೆ ಮತ್ತು ಶ್ರೀಮತಿ ವೀಣಾ ಬಿ. ಕೆ, ಪ್ರಧಾನ ಕಾರ್ಯದರ್ಶಿ ಯಾಗಿ ಮೊನಿಶಾ ಕೆ. ಜತೆ ಕಾರ್ಯದರ್ಶಿಯಾಗಿ ಲಿಖಿತ್ ಎ. ವಿ ಮತ್ತು ನಿಸ್ಮಿತ ಶೆಟ್ಟಿ ಹಾಗೂ ಕೋಶಾಧಿಕಾರಿಯಾಗಿ ಶಮಂತ್ ಕೊಲ್ಯ ಆಯ್ಕೆಯಾಗಿದ್ದಾರೆ.


Share with

Leave a Reply

Your email address will not be published. Required fields are marked *