ತಿರುಪತಿ ದೇವಾಲಯದಲ್ಲಿ ರೀಲ್ಸ್ ಮಾಡಿದ್ರೆ ಜೈಲು!

Share with

ತಿರುಪತಿ ತಿರುಮಲ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ರೀಲ್ಸ್ ಅಥವಾ ತಮಾಷೆಯ ವಿಡಿಯೋ ಶೂಟಿಂಗ್ ಮಾಡಿದರೆ FIR ದಾಖಲಿಸಲಾಗುವುದು ಎಂದು TTD ಎಚ್ಚರಿಸಿದೆ.

TTD ಸಂಸ್ಥೆಯ ಎಚ್ಚರಿಕೆ ಏನು?
“ದೇವಾಲಯದಲ್ಲಿ ಶಾಂತಿಯುತವಾಗಿ ಪೂಜಾ ಕಾರ್ಯ ನಡೆಯಬೇಕು. ಇಲ್ಲಿಗೆ ಬರುವ ಭಕ್ತರು ತಮ್ಮ ಸಂಕಷ್ಟಗಳ ಪರಿಹಾರಕ್ಕಾಗಿ ದೇವರ ದರ್ಶನಕ್ಕೆ ಬರುತ್ತಾರೆ. ಈ ಪವಿತ್ರ ಸ್ಥಳದಲ್ಲಿ ರೀಲ್ಸ್‌ ಅಥವಾ ತಮಾಷೆಯ ವಿಡಿಯೋ ಶೂಟಿಂಗ್ ಮಾಡುವುದು ದೇವಾಲಯದ ಪವಿತ್ರತೆಯನ್ನು ಹಾನಿಗೊಳಿಸುತ್ತದೆ ಮತ್ತು ಭಕ್ತರ ಭಾವನೆಗಳಿಗೆ ನೋವು ಉಂಟುಮಾಡುತ್ತದೆ.” ಹೀಗಾಗಿ ಇನ್ನು ಮುಂದೆ ಇಂತಹ ಯಾವುದೇ ವಿಡಿಯೋ ಅಥವಾ ರೀಲ್ಸ್ ಅನ್ನು ಮಾಡುವವರ ಮೇಲೆ ಎಫ್‌ಐ‌ಆರ್ ದಾಖಲಿಸಲಾಗುವುದು. ತಾತ್ಕಾಲಿಕವಾಗಿ ಸ್ಥಳದಲ್ಲೇ ಬಂಧನ, ನಂತರ ಜೈಲು ಶಿಕ್ಷೆ ಹಾಗೂ ದಂಡ ವಿಧಿಸುವಂತೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಟಿ‌ಟಿ‌ಡಿ ಸಂಸ್ಥೆ ತಿಳಿಸಿದೆ. 


Share with

Leave a Reply

Your email address will not be published. Required fields are marked *