ತಮಿಳುನಾಡು ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿರುವ TVK ಪಕ್ಷದ ಲೀಡರ್, ನಟ ವಿಜಯ್‌ಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ಹೊಸ ಪಕ್ಷ ಕಟ್ಟಿ ಮೊದಲ ಪ್ರಯತ್ನದಲ್ಲೇ ಅದ್ಭುತ ಮೈಲಿಗಲ್ಲು ಸ್ಥಾಪಿಸಿದ ವಿಜಯ್ ಶ್ರಮ, ಜನಬೆಂಬಲಕ್ಕೆ ಸ್ಯಾಂಡಲ್‌ವುಡ್ ನಟರು ಮೆಚ್ಚುಗೆ ಸೂಚಿಸಿದ್ದಾರೆ. ಕನ್ನಡ ಸ್ಟಾರ್‌ಗಳಾದ ಶಿವಣ್ಣ, ರಿಷಬ್ ಶೆಟ್ಟಿ ವಿಜಯ್ ಅವರ ಯಶಸ್ಸನ್ನು ಕೊಂಡಾಡಿದ್ದಾರೆ. TVK 108 ಸ್ಥಾನಗಳನ್ನು ಗೆದ್ದಿದ್ದು, ತಮಿಳುನಾಡು ನೂತನ CM ಆಗಿ ವಿಜಯ್ ನಾಡಿದ್ದು ಪ್ರಮಾಣ ಸ್ವೀಕರಿಸಲಿದ್ದಾರೆ.




