ಕೌಲಾಲಂಪುರ: ಕರ್ನಾಟಕ ಸರ್ಕಾರದಂತೆ, ಮಲೇಷ್ಯಾದ ಸರ್ಕಾರ ಕೂಡ ಅಲ್ಲಿನ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿರ್ಬಂಧಿಸಲು ಮುಂದಾಗಿದೆ. ಅಲ್ಲಿನ ಸಾಮಾಜಿಕ ಜಾಲತಾಣ ಕಂಪನಿಗಳಿಗೆ ತಾಕೀತು ಮಾಡಿರುವ ಸರ್ಕಾರ, ’16 ವರ್ಷದೊಳಗಿನ ಮಕ್ಕಳ ಖಾತೆಗಳನ್ನು ರದ್ದುಗೊಳಿಸುವಂತೆ, ಇನ್ಮುಂದೆ ಎಳೆಯರು ಸಾಮಾಜಿಕ ಜಾಲತಾಣ ಖಾತೆ ತೆರೆಯಲು ಸಾಧ್ಯವಾಗದಂತೆ ಹೊಸ ವ್ಯವಸ್ಥೆ ಅಳವಡಿಸಿಕೊಳ್ಳಬೇಕು. ಇಲ್ಲವಾದರೆ, 23 ಕೋಟಿ ರೂ. ದಂಡ ವಿಧಿಸಲಾಗುತ್ತದೆ’ ಎಂದು ಎಚ್ಚರಿಸಿದೆ.

ಇತ್ತ, ಸಾಮಾಜಿಕ ಜಾಲತಾಣ ಬಳಸುವ 16ರೊಳಗಿನ ಅಂದಾಜು 80 ಲಕ್ಷ ಮಂದಿಗೆ ಮುಂದಿನ ಮೂರು ತಿಂಗಳೊಳಗಾಗಿ, ತಮ್ಮ ಖಾತೆಗಳಲ್ಲಿರುವ ವಿಡಿಯೋ, ಫೋಟೋ, ಇನ್ನಿತರ ಡೇಟಾ ಡೌನ್ ಲೋಡ್ ಮಾಡಿಕೊಳ್ಳುವಂತೆ ಸೂಚಿಸಿದೆ.




