ಬೆಳಿಗ್ಗೆ ಟೀ, ಕಾಫಿಯ ಬದಲು ತುಳಸಿ & ಶುಂಠಿಯ ನೀರು ಕುಡಿಯಿರಿ. ಈ ಎರಡೂ ಆರೋಗ್ಯಕ್ಕೆ ಪ್ರಯೋಜನಕಾರಿ.

ಖಾಲಿ ಹೊಟ್ಟೆಯಲ್ಲಿ ಈ ನೀರು ಕುಡಿದರೆ ನಿಮ್ಮ ಜೀರ್ಣಕ್ರಿಯೆ ಸುಧಾರಿಸುತ್ತದೆ. ತುಳಸಿಯಲ್ಲಿ ಆ್ಯಂಟಿ ಫಂಗಲ್, ಆ್ಯಂಟಿ ವೈರಲ್ & ಆ್ಯಂಟಿ ಕೊಲೆಸ್ಟ್ರಾಲ್ ಗುಣಗಳಿವೆ. ಇದು ರೋಗನಿರೋಧಕ ವ್ಯವಸ್ಥೆಯನ್ನು ಬಲವಾಗಿಸುತ್ತದೆ, ಹೃದಯವನ್ನು ಆರೋಗ್ಯವಾಗಿ ಇರಿಸುತ್ತದೆ. ಶುಂಠಿಯಲ್ಲಿ ಜಿಂಜರಾಲ್ ಇದ್ದು ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಜೊತೆಗೆ ಕೊಬ್ಬು ನಷ್ಟಕ್ಕೂ ಸಹಾಯ ಮಾಡುತ್ತದೆ.




