ಮಹಿಳೆಯರ ಖಾಸಗಿ ಭಾಗದಲ್ಲಿ ಡ್ರಗ್ಸ್ ಸಾಗಣೆ..! ಮಹಿಳೆಯರು ಸೇರಿ 7 ಮಂದಿ ಅರೆಸ್ಟ್

Share with

ತ್ರಿಶೂರ್: ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ತಮ್ಮ ಖಾಸಗಿ ಅಂಗದಲ್ಲಿ ನಿಷೇಧಿತ ಎಂಡಿಎಂಎ (MDMA) ಡ್ರಗ್ಸ್ ಸಾಗಿಸುತ್ತಿದ್ದ ವೇಳೆ ಕೇರಳಂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಯುವತಿಯರು ಸೇರಿದಂತೆ ಒಟ್ಟು ಏಳು ಮಂದಿ ಅಂತರರಾಜ್ಯ ಡ್ರಗ್ಸ್‌ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ.

ಕೇರಳಂ ಮಾದಕ ದ್ರವ್ಯ ವಿಶೇಷ ಕಾರ್ಯಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು 308 ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ಜಪ್ತಿ ಮಾಡಲಾಗಿದ್ದು, ಇದು ಇತ್ತೀಚಿನ ದಿನಗಳಲ್ಲಿ ಕೇರಳಂನಲ್ಲಿ ನಡೆದ ಅತಿ ದೊಡ್ಡ ಡ್ರಗ್ಸ್ ಜಪ್ತಿಯಾಗಿದೆ.

ಪಾಲಕ್ಕಾಡ್ ರೆಸಾರ್ಟ್ ಒಂದರಿಂದ ತ್ರಿಶೂರ್ ಕಡೆಗೆ ಬರುತ್ತಿದ್ದ ಕಾರನ್ನು ವಾಣಿಯಂಪಾರ ಎಂಬಲ್ಲಿ ಪೊಲೀಸರು ತಡೆದು ತಪಾಸಣೆ ನಡೆಸಿದಾಗ ಈ ಜಾಲ ಬೆಳಕಿಗೆ ಬಂದಿದೆ. ಕಾರಿನಲ್ಲಿದ್ದ ಶಿಫಾಸ್‌ (26), ವಿದ್ಯಾ (28), ಜಿಷ್ಣು (27), ಶ್ರೀ ಲಕ್ಷ್ಮೀ (20) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ತದನಂತರ ಶಬೀ‌ರ್ (34), ಅನ್ಯಾದ್ (31) ಮತ್ತು ಟಿ.ಟಿ. ಸುಮೇಶ್ (25) ಎಂಬುವವರನ್ನು ಬಂಧಿಸಲಾಗಿದೆ.


Share with

Leave a Reply

Your email address will not be published. Required fields are marked *